ಕರ್ನಾಟಕದ ಎಲ್ಲಾ RTO ಕಚೇರಿಗಳಿಗೆ ಸ್ವಂತ ಕಟ್ಟಡ; ತ್ವರಿತ ಕ್ರಮಕ್ಕೆ ರಾಮಲಿಂಗಾ ರೆಡ್ಡಿ ಕ್ರಮ, ಸುಸಜ್ಜಿತ RTO ಕಚೇರಿಗಳ ಸಾಲಿಗೆ ಅಂಜನಾಪುರ ಸೇರ್ಪಡೆ

ಬೆಂಗಳೂರು: ರಾಜ್ಯ ಸಾರಿಗೆ ವ್ಯವಸ್ಥೆ ಬಲಗೊಳ್ಳುತ್ತಿದ್ದು, ಸುಸಜ್ಜಿತ ಸಾರಿಗೆ ಕಚೇರಿಗಳ ಸಾಲಿಗೆ ಇದೀಗ ಅಂಜನಾಪುರ ನೂತನ ಪ್ರಾದೇಶಿಕ ಸಾರಿಗೆ ಕಚೇರಿ ಸೇರ್ಪಡೆಗೊಂಡಿದೆ. 11.25 ಕೋಟಿ ರೂಪಾಯಿ ವೆಚ್ಚದಲ್ಲಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ನೂತನ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ‌.ಕೃಷ್ಣಪ್ಪ‌ ಅವರ ಉಪಸ್ಥಿತಿಯಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅವರು ಹಲವು ಸುಧಾರಣಾ ಕ್ರಮಗಳ ಬಗ್ಗೆ ಮಾಹಿತಿ ಮಾಹಿತಿ ಹಂಚಿಕೊಂಡರು. ಸಾರಿಗೆ ಇಲಾಖೆಯು (RTO) ರಾಜ್ಯದಲ್ಲಿ 7 ಸ್ವಂತ ಕಚೇರಿ ಕಟ್ಟಡವನ್ನು ವೆಚ್ಚ ರೂ. 45.74 ಕೋಟಿಗಳಲ್ಲಿ‌ ಹೊಂದಿದೆ ಎಂದರು.

RTO 8‌ ಸ್ವಂತ ಕಟ್ಟಡ ಕಚೇರಿಗಳು ನಿರ್ಮಾಣ ವೆಚ್ಚ ರೂ. 70.00 ಕೋಟಿಗಳು ಕಾಮಗಾರಿ ಪ್ರಗತಿಯಲ್ಲಿದೆ. ಮಧುಗಿರಿ ಮತ್ತು ಹೊನ್ನಾವರ ಕಚೇರಿ ಕಟ್ಟಡಗಳ ಕಾಮಗಾರಿಗಳನ್ನು ಒಟ್ಟು ರೂ.10.05 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು. ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದರು.

ಸ್ವಯಂ ಚಾಲಿತ ಪರೀಕ್ಷಾ ಪಥಗಳ ನಿರ್ಮಾಣ ಕಾಮಗಾರಿ, 9 ಡ್ರೈವಿಂಗ್ ಟ್ರ್ಯಾಕ್ ವೆಚ್ಚ ರೂ.44.21 ಕೋಟೆಗಳು ನಿರ್ಮಿಸಲಾಗಿದೆ. 28 ಡ್ರೈವಿಂಗ್ ಟ್ರ್ಯಾಕ್ ಕಾಮಗಾರಿ ಪ್ರಗತಿಯಲ್ಲಿದ್ದು, ಒಟ್ಟು ವೆಚ್ಚ 203 ಕೋಟಿ ರೂಪಾಯಿ ಎಂದು ಅವರು ತಿಳಿಸಿದರು.

ಹೊನ್ನಾವರ, ಚಾಮರಾಜನಗರ ಮತ್ತು ಚಿತ್ರದುರ್ಗ ಗಳಲ್ಲಿ ರೂ.21 ಕೋಟಿ ವೆಚ್ಚದಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಾಣ ಕೈಗೊಳ್ಳಲು ಉದ್ದೇಶಿಸಿದೆ ಎಂದವರು ವಿವರಿಸಿದರು.

ರಾಜ್ಯದಲ್ಲಿ ಜಿಲ್ಲೆಗೆ ಒಂದರಂತೆ ಪಿ.ಪಿ.ಪಿ. ಅಡಿ 32 ಸ್ಥಳಗಳಲ್ಲಿ ಸ್ವಯಂ ಚಾಲಿತ ವಾಹನ ಪರೀಕ್ಷಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಜೊತೆಗೆ, ರಾಜ್ಯದಲ್ಲಿ ಗುಣಮಟ್ಟದ ಚಾಲಕರನ್ನು ತರಬೇತಿಗೊಳಿಸುವ ನಿಟ್ಟಿನಲ್ಲಿ ಭಾರಿ ವಾಹನ ಚಾಲಕರ 4 ತರಬೇತಿ ಕೇಂದ್ರಗಳನ್ನು ರೂ. 60.76 ಕೋಟಿಗಳಲ್ಲಿ ಸ್ಥಾಪಿಸಲಾಗಿದೆ. 1 ತರಬೇತಿ ಕೇಂದ್ರ ಕಾಮಗಾರಿ ಪ್ರಗತಿಯಲ್ಲಿದ್ದು, ಅದರ ವೆಚ್ಚ 6.50 ಕೋಟಿ ಗಳಾಗಿದೆ. ಇದರೊಂದಿಗೆ, ವಿಜಯಪುರ, ಬಳ್ಳಾರಿ ಮತ್ತು ನಾಗಮಂಗಲ ಗಳಲ್ಲಿ ಭಾರಿ ವಾಹನ ಚಾಲಕರ ತರಬೇತಿ ಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಸಚಿವರು ತಿಳಿಸಿದರು.

Previous post Astronaut Shubhanshu Shukla to return to India today; to meet PM Modi
Next post CM Rekha Gupta, Union Minister Jitendra Singh receive astronaut Shubhanshu Shukla at Delhi airport