ಸೆಪ್ಟೆಂಬರ್ 28ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 12’; ಕಿಚ್ಚನ ಗರಡಿ ಸೇರುವ ಸ್ಪರ್ಧಿಗಳ ಬಗ್ಗೆ ಕುತೂಹಲ

ಬೆಂಗಳೂರು: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಈಗಾಗಲೇ 11 ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ಈ ಶೋ, ಶೀಘ್ರದಲ್ಲೇ 12ನೇ ಸೀಸನ್ ಪ್ರೇಕ್ಷಕರ ಮುಂದೆ ಬರಲಿದೆ. ಸೆಪ್ಟೆಂಬರ್ 28, ಭಾನುವಾರದಂದು ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು, ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುವ ಸ್ಪರ್ಧಿಗಳು ಯಾರು ಎಂಬ ಕುತೂಹಲ ಉಂಟಾಗಿದೆ.

ಕಿಚ್ಚ ಸುದೀಪ್ ಅವರು ನಿರೂಪಣೆಗೆ ಸಜ್ಜಾಗಿದ್ದು, ಶೋವನ್ನು ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪ್ರೋಮೋ ಬಿಡುಗಡೆ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಪ್ರೋಮೋದಲ್ಲಿ – “ರಿಯಾಲಿಟಿ ಶೋಗಳ ಬಾಸ್, ರಿಯಲ್ ಎಂಟರ್‌ಟೈನ್‌ಮೆಂಟ್‌ಗೆ ಒಂದೇ ಅಡ್ರೆಸ್. ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 28ಕ್ಕೆ” ಎಂದು ಘೋಷಿಸಲಾಗಿದೆ.

ಅದರಲ್ಲೇ ಸುದೀಪ್ ಅವರು “ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಸ್ವಾಗತ” ಎಂದು ಹೇಳುತ್ತಾ ಎಂಟ್ರಿ ನೀಡಿದ್ದಾರೆ. ಹೊಸ ಸೆಟ್, ಹೊಸ ಸ್ಪರ್ಧಿಗಳು ಸಿದ್ಧರಾಗಿರುವುದನ್ನು ಸೂಚಿಸುವ ಈ ವಿಡಿಯೊದಲ್ಲಿ, “7 ಕೋಟಿ ಕನ್ನಡಿಗರೂ ರೆಡಿ… ಸರ್ ನೀವು ರೆಡಿನಾ?” ಎಂದು ಕೇಳಲಾಗುತ್ತಾ, ಸುದೀಪ್ ಕೂಡ “ರೆಡಿ” ಎಂದಿದ್ದಾರೆ.

“ಕರ್ನಾಟಕದ ಊಟ, ಉಡುಗೆ, ಅಭಿರುಚಿಗಳಲ್ಲಿ ವೈವಿದ್ಯತೆ ಇದ್ದರೂ, ಎಲ್ಲರನ್ನೂ ಒಂದಾಗಿಸುವ ಶಕ್ತಿ ಬಿಗ್ ಬಾಸ್ ಶೋಗೆ ಮಾತ್ರ” ಎಂದು ಪ್ರೋಮೋದಲ್ಲಿ ಹೇಳಲಾಗಿದೆ.

Previous post From temple to touchscreen: Haridwar welcomes ‘Ek Ishwar’ App for virtual puja
Next post <div>Censor Board clears actor KPY Bala’s ‘Gandhi Kannadi’ for release with a ‘U’ certificate</div>