ಬೆಂಗಳೂರು : KSRTC ನೌಕರರು ಅಪಘಾತ ಹೊರತುಪಡಿಸಿ ಇತರೇ ಕಾರಣಗಳಿಂದ ನೌಕರರು ಮರಣ ಹೊಂದಿದಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.10 ಲಕ್ಷಗಳಿಂದ ರೂ. 20 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ.
ಸೇವೆಯಲ್ಲಿರುವಾಗ ಸಿಬ್ಬಂದಿ ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ರೂ.1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ವಿತರಿಸುವ ಯೋಜನೆ ಈಗಾಗಲೇ ಜಾರಿಯಲ್ಲಿರುತ್ತದೆ.
ಇದೇ ಮೊದಲ ಬಾರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ರವರು ಅಪಘಾತ ಹೊರತುಪಡಿಸಿ ಇತರೆ ಕೆಳಕಂಡ ಪ್ರಕರಣಗಳಲ್ಲಿ ರೂ.6 ಲಕ್ಷ ಪರಿಹಾರ ಮೊತ್ತ ನೀಡುತ್ತಿದ್ದಾರೆ.
ನಿಗಮದ ನೌಕರರು ಅಪಘಾತ ಹೊರತುಪಡಿಸಿ ಇತರೇ ಕಾರಣಗಳಿಂದ ಅಂದರೆ ಹೃದಯಾಘಾತ, ಕ್ಯಾನ್ಸರ್, ಕಿಡ್ನಿ ಹಾಗೂ ಇತರೇ ಕಾರಣಗಳಿಂದ ನೌಕರರು ಮರಣ ಹೊಂದಿದಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.3.00 ಲಕ್ಷಗಳಿಂದ ರೂ. 10.00 ಲಕ್ಷಗಳಿಗೆ ಹೆಚ್ಚಿಸಿ 01.10.2023 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿತ್ತು. ಅದರಂತೆ ಇದುವರೆವಿಗೂ 157 ಮೃತ ನೌಕರರ ಅವಲಂಬಿತರಿಗೆ ತಲಾ ರೂ.10 ಲಕ್ಷಗಳ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ.
ಮೃತ ನೌಕರರ ಅವಲಂಬಿತರಿಗೆ ಹೆಚ್ಚಿನ ಮೊತ್ತದ ಪರಿಹಾರ ನೀಡುವ ಮೂಲಕ, ಆರ್ಥಿಕ ಭದ್ರತೆ ಒದಗಿಸಿಕೊಡುವ ಸದುದ್ದೇಶದಿಂದ:01.09.2025 ರಿಂದ ಜಾರಿಗೆ ಬರುವಂತೆ ನಿಗಮದ ವತಿಯಿಂದ ನೀಡಲಾಗುತ್ತಿರುವ ರೂ.10 ಲಕ್ಷಗಳ ಪರಿಹಾರ ಮೊತ್ತವನ್ನು ರೂ. 14 ಲಕ್ಷ ಗಳಿಗೆ ಹೆಚ್ಚಿಸಿ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಇದರೊಂದಿಗೆ ರೂ.6 ಲಕ್ಷಗಳು SBI ಬ್ಯಾಂಕ್ ವತಿಯಿಂದ ,ಒಟ್ಟು ಮೊತ್ತ ರೂ.20 ಲಕ್ಷಗಳಾಗಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.